ದುಬೈ: ಐಪಿಎಲ್ 13 ರಲ್ಲಿ ನಿನ್ನೆಯ ಪಂದ್ಯದಲ್ಲಿ ಸೋಲು ಅನುಭವಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಅಂತಿಮ ಓವರ್ ನ್ನು ರವೀಂದ್ರ ಜಡೇಜಾಗೆ ಕೊಟ್ಟಿದ್ದಕ್ಕೆ ಟೀಕೆ ಅನುಭವಿಸಿದ್ದಾರೆ. ಅಂತಿಮ ಓವರ್ ನಲ್ಲಿ ಡೆಲ್ಲಿ ಗೆಲುವು ಸಾಧಿಸಿತ್ತು. ಆ ಓವರ್ ನ್ನು ಜಡೇಜಾ ಬದಲಿಗೆ ವೇಗಿಗಳಿಗೆ ನೀಡಬೇಕಿತ್ತು ಎಂದು ಹಲವರು ಟೀಕಿಸಿದ್ದಾರೆ. ಧೋನಿಯ ಕಳಪೆ ನಿರ್ಧಾರ ಇದಾಗಿತ್ತು. ಇದರಿಂದಲೇ ಚೆನ್ನೈ ಗೆಲ್ಲಬಹುದಾಗಿದ್ದ ಪಂದ್ಯ ಸೋತಿತು ಎಂದು ನೆಟ್ಟಿಗರು ಟೀಕಿಸಿದ್ದಾರೆ.