ದುಬೈ: ಐಪಿಎಲ್ ನಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಯಾರಿಗೆ ಸಪೋರ್ಟ್ ಮಾಡೋದು ಎಂದು ಕರ್ನಾಟಕದ ಅಭಿಮಾನಿಗಳಿಗೆ ಗೊಂದಲ ಕಾಡಬಹುದು. ಯಾಕೆಂದರೆ ಇಂದು ನಡೆಯುತ್ತಿರುವುದು ಆರ್ ಸಿಬಿ ಮತ್ತು ಕನ್ನಡಿಗರೇ ತುಂಬಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯ. ಆರ್ ಸಿಬಿ ಈಗಾಗಲೇ ಒಂದು ಪಂದ್ಯ ಗೆದ್ದ ಉತ್ಸಾಹದಲ್ಲಿದೆ. ಆದರೆ ಅತ್ತ ಪಂಜಾಬ್ ಮೊದಲ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಸೋತು ನಿರಾಸೆ ಅನುಭವಿಸಿತ್ತು. ಜತೆಗೆ ಪಂಜಾಬ್ ತಂಡದಲ್ಲಿ ನಾಯಕನಿಂದ ಹಿಡಿದು