ದುಬೈ: ಮೊನ್ನೆಯಷ್ಟೇ ಮುಂಬೈ ಇಂಡಿಯನ್ಸ್ ತಂಡವನ್ನು ಥ್ರಿಲ್ಲಿಂಗ್ ಪಂದ್ಯದಲ್ಲಿ ಸೋಲಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ಇಂದು ಮತ್ತೊಂದು ಪ್ರಬಲ ತಂಡ ಡೆಲ್ಲಿ ಕ್ಯಾಪಿಟಲ್ಸ್ ನ್ನು ಎದುರಿಸಲಿದೆ. ಪಂಜಾಬ್ ನಿಧಾನವಾಗಿ ಗೆಲುವಿನ ಹಳಿಗೆ ಮರಳುತ್ತಿದ್ದು, ಅದೂ ಥ್ರಿಲ್ಲಿಂಗ್ ಜಯಗಳ ಮೂಲಕ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸುತ್ತಿದೆ. ಬ್ಯಾಟಿಂಗ್ ನಲ್ಲಿ ಸ್ವತಃ ನಾಯಕ ಕೆಎಲ್ ರಾಹುಲ್ ಲೀಡಿಂಗ್ ಫ್ರಮ್ ದಿ ಫ್ರಂಟ್ ಎನ್ನುವಂತೆ ಮೆರೆಯುತ್ತಿರುವುದು ಇದಕ್ಕೆ ಕಾರಣ. ಇನ್ನು, ಡೆಲ್ಲಿ ಕೂಡಾ ಉತ್ತಮ