ದುಬೈ: ಐಪಿಎಲ್ 13 ರ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಸೋಲು ಕಂಡಿದೆ. ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ 97 ರನ್ ಗಳ ಭಾರೀ ಅಂತರದಿಂದ ಆರ್ ಸಿಬಿಗೆ ಸೋಲುಣಿಸಿದೆ. ಕನ್ನಡಿಗರೇ ಅಧಿಕವಾಗಿರುವ ಪಂಜಾಬ್ ಪರ ಸ್ವತಃ ನಾಯಕ ಕೆಎಲ್ ರಾಹುಲ್ ದಾಖಲೆಯ ಶತಕ ಸಿಡಿಸಿ ಮೊತ್ತವನ್ನು ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 206 ರನ್ ಗೇರಿಸಿದರು.