ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ತಮ್ಮ ಶತಕದ ಇನಿಂಗ್ಸ್ ಬಳಿಕ ನೀಡಿದ ಹೇಳಿಕೆಯೊಂದು ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ.ತಮ್ಮ ಭರ್ಜರಿ ಇನಿಂಗ್ಸ್ ಬಗ್ಗೆ ಮಾತನಾಡಿರುವ ಕೆಎಲ್ ನನ್ನ ಈ ಆಟಕ್ಕೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊನ್ನೆ ಆಡಿದ್ದ ಇನಿಂಗ್ಸ್ ಸ್ಪೂರ್ತಿ ಎಂದು ಹೊಗಳಿದ್ದರು. ಈ ಮೂಲಕ ರೋಹಿತ್ ರನ್ನು ಹೊಗಳಿ ರಾಹುಲ್ ಬೇಕೆಂದೇ ಕೊಹ್ಲಿಗೆ ಟಾಂಗ್ ಕೊಟ್ಟರೇ ಎಂದು ಇದೀಗ ಅಭಿಮಾನಿಗಳು ವ್ಯಾಖ್ಯಾನಿಸುತ್ತಿದ್ದಾರೆ. ರೋಹಿತ್