ಐಪಿಎಲ್ 13: ಮುಂಬೈ-ಡೆಲ್ಲಿ ಪ್ರಬಲರ ಹೋರಾಟ

ದುಬೈ, ಭಾನುವಾರ, 11 ಅಕ್ಟೋಬರ್ 2020 (10:38 IST)

ದುಬೈ: ರ ಎರಡನೇ ಪಂದ್ಯದಲ್ಲಿ ಇಂದು ಪ್ರಬಲ ಎರಡು ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಲಿದೆ.


 
ಎರಡೂ ತಂಡಗಳು ಅಗ್ರ ಎರಡು ಸ್ಥಾನದಲ್ಲಿರುವ ಕಾರಣ ಅಭಿಮಾನಿಗಳಿಗೆ ಇಂದಿನ ಪಂದ್ಯ ಸಂಡೇ ಧಮಾಕವಾಗುವುದು ಪಕ್ಕಾ. ಹಿಟ್ ಮ್ಯಾನ್ ರೋಹಿತ್ ಶರ್ಮಾ, ಪಾಂಡ್ಯ, ಸೂರ್ಯಕುಮಾರ್ ಮುಂಬೈ ಬ್ಯಾಟಿಂಗ್ ಶಕ್ತಿ. ವೇಗಿ ಜಸ್ಪ್ರೀತ್ ಬುಮ್ರಾ ಫಾರ್ಮ್ ಗೆ ಬಂದಿದ್ದು, ಬೌಲಿಂಗ್ ಪಡೆ ಸಶಕ್ತವಾಗಿದೆ. ಇತ್ತ ಡೆಲ್ಲಿ ಕೂಡಾ ಯುವ ಬ್ಯಾಟ್ಸ್ ಮನ್ ಗಳ ಫಾರ್ಮ್ ನಿಂದಾಗಿ ಬ್ಯಾಟಿಂಗ್ ಸದೃಢ ಮಾಡಿಕೊಂಡಿದೆ. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.ಇದರಲ್ಲಿ ಇನ್ನಷ್ಟು ಓದಿ :  


ಇದರಲ್ಲಿ ಇನ್ನಷ್ಟು ಓದಿ :