ದುಬೈ: ಐಪಿಎಲ್ 13 ರ ಇಂದಿನ ಪಂದ್ಯದಲ್ಲಿ ಅಗ್ರ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಗೆ ರಾಜಸ್ಥಾನ್ ರಾಯಲ್ಸ್ ಸವಾಲಾಗಲಿದೆ.ಸತತ ಗೆಲುವಿನಿಂದ ಬೀಗುತ್ತಿರುವ ಮುಂಬೈ ಇಂಡಿಯನ್ಸ್ ಗೆ ರಾಜಸ್ಥಾನ್ ಸುಲಭದ ತುತ್ತಲ್ಲ. ಕಳೆದ ಪಂದ್ಯದಲ್ಲಿ ಸೋತರೂ ರಾಜಸ್ಥಾನ್ ಯಾವ ಹಂತದಲ್ಲೂ ಸಿಡಿದೇಳುವ ಸಾಮರ್ಥ್ಯ ಹೊಂದಿದೆ. ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಕೈ ಕೊಟ್ಟಿದ್ದರಿಂದ ರಾಜಸ್ಥಾನ್ ಗೆ ಸಂಕಷ್ಟ ಎದುರಾಗಿತ್ತು. ಈ ಪಂದ್ಯದಲ್ಲಿ ಆ ತಪ್ಪು ಸರಿಪಡಿಸಿಕೊಂಡರೆ ಮುಂಬೈಗೆ ಪ್ರಬಲ ಸವಾಲೊಡ್ಡುವುದು ಖಚಿತ.