ದುಬೈ: ಐಪಿಎಲ್ 13 ರ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದ್ ಪರಸ್ಪರ ಮುಖಾಮುಖಿಯಾಗಲಿದೆ.ಎರಡೂ ತಂಡಗಳು ಪ್ಲೇ ಆಫ್ ಹಂತಕ್ಕೇರಲು ಎಲ್ಲಾ ಪಂದ್ಯಗಳನ್ನೂ ಗೆಲ್ಲುವ ಅನಿವಾರ್ಯತೆಯಲ್ಲಿವೆ. ಆದರೆ ಈ ಪೈಕಿ ಕಳೆದ ಪಂದ್ಯ ಸೋತಿರುವ ರಾಜಸ್ಥಾನ್ ಮತ್ತು ಹೈದರಾಬಾದ್ ಗೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ರಾಜಸ್ಥಾನ್ ಇದುವರೆಗೆ 10 ಪಂದ್ಯಗಳನ್ನಾಡಿ ಅಂಕಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದೆ. ಆದರೆ ಹೈದರಾಬಾದ್ 9 ಪಂದ್ಯಗಳನ್ನಾಡಿ 7 ನೇ ಸ್ಥಾನದಲ್ಲಿದೆ.