ದುಬೈ: ಐಪಿಎಲ್ 13 ರಲ್ಲಿ ಪ್ಲೇ ಆಫ್ ಕನಸಿನಲ್ಲಿದ್ದ ಪಂಜಾಬ್ ಗೆ ಚೆನ್ನೈ ತಣ್ಣೀರೆರಚಿದ್ದರೆ, ಡೆಲ್ಲಿ ಕನಸಿಗೆ ರಾಜಸ್ಥಾನ್ ಕೊಳ್ಳಿಯಿಟ್ಟಿತ್ತು. ಇದೀಗ ಆರ್ ಸಿಬಿ ಮತ್ತು ಡೆಲ್ಲಿ ನಡುವೆ ಇಂದು ನಡೆಯಲಿರುವ ಲೀಗ್ ಪಂದ್ಯಕ್ಕೆ ಮಹತ್ವ ಬಂದಿದೆ.ಅಂಕಪಟ್ಟಿಯಲ್ಲಿ ಸದ್ಯಕ್ಕೆ ಬೆಂಗಳೂರು 2 ನೇ ಸ್ಥಾನದಲ್ಲಿದೆ. ಡೆಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಎರಡೂ ತಂಡಗಳ ಪೈಕಿ ಆರ್ ಸಿಬಿ ಎರಡನೇ ತಂಡವಾಗಿ ಪ್ಲೇ ಆಫ್ ಗೆ ಹೋಗಬೇಕಾದರೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕು.