ದುಬೈ: ಐಪಿಎಲ್ 13 ರಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ನಡುವೆ ಪಂದ್ಯ ನಡೆಯಲಿದ್ದು, ಎರಡೂ ತಂಡಗಳೂ ಪ್ಲೇ ಆಫ್ ಹಂತದಲ್ಲಿರುವುದರಿಂದ ಇಂದಿನ ಪಂದ್ಯದಲ್ಲಿ ರೋಚಕತೆ ನಿರೀಕ್ಷಿಸಬಹುದು.ಎರಡೂ ತಂಡಗಳು ಈಗಾಗಲೇ ಅಗ್ರ ನಾಲ್ಕರೊಳಗೆ ಸ್ಥಾನ ಪಡೆದಿದೆ. ಹೀಗಾಗಿ ಕೊನೆಯದಾಗಿ ಯಾರು ಹೆಚ್ಚು ಅಂಕ ಸಂಪಾದಿಸಿ ಮುಂದಿನ ಹಂತಕ್ಕೆ ಹೋಗುತ್ತಾರೆ ಎಂದು ಕಾದು ನೋಡಬೇಕು. ಡೆಲ್ಲಿಗೆ ಕಡಿವಾಣ ಹಾಕಬೇಕಾದರೆ ಆರ್ ಸಿಬಿ ಮತ್ತೊಮ್ಮೆ ಅದ್ಭುತ ಬೌಲಿಂಗ್ ಪ್ರದರ್ಶನ ತೋರಲೇಬೇಕು.