ಐಪಿಎಲ್ 13: ಇಂದು ಆರ್ ಸಿಬಿ ವರ್ಸಸ್ ಕೆಎಲ್ ರಾಹುಲ್ ಕಾಳಗ

ದುಬೈ, ಗುರುವಾರ, 15 ಅಕ್ಟೋಬರ್ 2020 (09:38 IST)

ದುಬೈ: ಐಪಿಎಲ್ ನಲ್ಲಿ ಇಂದು ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕನ್ನಡಿಗರೇ ತುಂಬಿಕೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗಲಿದೆ.


 
ಹಿಂದಿನ ಪಂದ್ಯದಲ್ಲಿ ಪಂಜಾಬ್ ಆರ್ ಸಿಬಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಆ ಪಂದ್ಯದಲ್ಲಿ ರಾಹುಲ್ ಶತಕ ಕೂಡಾ ದಾಖಲಿಸಿದ್ದರು. ಆದರೆ ಈಗ ಆರ್ ಸಿಬಿ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಸತತ ಗೆಲುವಿನಿಂದ ಆತ್ಮವಿಶ್ವಾಸದಲ್ಲಿದೆ. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ಸತತ ಸೋಲಿನ ಹತಾಶೆಯಲ್ಲಿದೆ. ಎಲ್ಲಾ ಸರಿ ಇದ್ದರೂ ಯಾಕೋ ಅದೃಷ್ಟ ಮಾತ್ರ ಕೆಎಲ್ ರಾಹುಲ್ ಬಳಗಕ್ಕೆ ಕೈ ಕೊಡುತ್ತಲೇ ಇದೆ. ಇಂದಿನ ಪಂದ್ಯದಲ್ಲಿ ಎರಡು ತಂಡಗಳ ನಡುವೆ ಜಿದ್ದಾಜಿದ್ದಿ ನಿರೀಕ್ಷಿಸಬಹುದು. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :  


ಇದರಲ್ಲಿ ಇನ್ನಷ್ಟು ಓದಿ :