ದುಬೈ: ಇದುವರೆಗೆ ಅಗ್ರಸ್ಥಾನಿಯೆಂದು ಮೆರೆಯುತ್ತಿದ್ದವರೆಲ್ಲಾ ಈಗ ಒಂದೇ ಒಂದು ಗೆಲುವಿಗಾಗಿ ಹಪಹಪಿಸುವಂತಾಗಿದೆ. ಕೆಳಗಿದ್ದವರೆಲ್ಲಾ ಮೇಲೇರಿದ್ದಾರೆ. ಇದು ಐಪಿಎಲ್ ಕಾಲ ಚಕ್ರ! ಜೀವನದಲ್ಲಾದರೂ ಅಷ್ಟೇ ಮೇಲಿದ್ದವರು ಕೆಳಗಿಳಿಯಲೇಬೇಕು ಎಂಬ ನಿಯಮವಿದೆ. ಅದೇ ನಿಯಮ ಈಗ ಐಪಿಎಲ್ ತಂಡಗಳ ಪಾಲಿಗೂ ಅನ್ವಯಿಸುತ್ತಿದೆ. ಇದುವರೆಗೆ ಅಗ್ರ ಸ್ಥಾನದಲ್ಲಿ ಮೆರೆಯುತ್ತಿದ್ದ ಚೆನ್ನೈ ಈ ಬಾರಿ ಸೋಲಿನ ಹತಾಶೆಯಲ್ಲಿದೆ. ಪ್ರತೀ ಬಾರಿ ಅಧಿಕಾರಯುತ ಗೆಲುವು ಕಾಣುತ್ತಿದ್ದ ಮುಂಬೈ ಪ್ರತೀ ಗೆಲುವಿಗೂ ಬೆವರು ಹರಿಸುತ್ತಿದೆ.ಈ ಬಾರಿಯ ಐಪಿಎಲ್ ನಲ್ಲಿ