ದುಬೈ: ಐಪಿಎಲ್ 13 ರ ಫೈನಲ್ಸ್ ತಲುಪಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಾಗೂ ಡೆಲ್ಲಿ ವೇಗಿ ಕಗಿಸೊ ರಬಾಡ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ. ಡೆಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಫೈನಲ್ಸ್ ತಲುಪಿದ ಸಾಧನೆ ಮಾಡಿದೆ. ಇನ್ನು, ಡೆಲ್ಲಿ ವೇಗಿ ಕಗಿಸೊ ರಬಾಡ ಈ ಬಾರಿಯ ಐಪಿಎಲ್ ನಲ್ಲಿ ಅದ್ಭುತ ಬೌಲಿಂಗ್ ಮಾಡುತ್ತಿದ್ದು ನಿನ್ನೆ 4 ವಿಕೆಟ್ ಕಬಳಿಸಿದ ಅವರು ಈ ಐಪಿಎಲ್ ನಲ್ಲಿ ಒಟ್ಟು 29 ವಿಕೆಟ್ ಕಬಳಿಸಿದರು.