ಬೆಂಗಳೂರು: ಈ ಬಾರಿಯ ಐಪಿಎಲ್ ನಲ್ಲಿ ಕಾಮೆಂಟೇಟರ್ ಗಳೇ ಸ್ಟಾರ್ ಗಳು. ನೇರವಾಗಿ ಮೈದಾನದಲ್ಲಿ ಪಂದ್ಯ ವೀಕ್ಷಿಸಲು ಸಾಧ್ಯವಾಗದ ಕಾರಣ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಸ್ಥಳೀಯ ಭಾಷೆಗಳಲ್ಲೂ ಕಾಮೆಂಟರಿ ನೀಡುವ ಮೂಲಕ ಜನರಿಗೆ ಮನರಂಜನೆ ನೀಡಲು ಪ್ರಯತ್ನಿಸುತ್ತಿದೆ. ಕ್ರಿಕೆಟ್ ಪ್ರಿಯ, ಸ್ವತಃ ಸಿಸಿಎಲ್ ಕ್ರಿಕೆಟ್ ಲೀಗ್ ಕೂಟದಲ್ಲಿ ಕರ್ನಾಟಕ ತಂಡದ ನಾಯಕರಾಗಿರುವ ಕಿಚ್ಚ ಸುದೀಪ್ ಕೂಡಾ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಗಾಗಿ ಕಾಮೆಂಟರಿ ಮಾಡಿದ್ದಾರೆ. ಕನ್ನಡ ಕಾಮೆಂಟರಿ, ಪ್ಯಾನೆಲ್ ಚರ್ಚೆಯಲ್ಲಿ