ದುಬೈ: ಐಪಿಎಲ್ 13 ರಲ್ಲಿ ಮತ್ತೊಮ್ಮೆ ಕೂದಲೆಳೆಯ ಅಂತರದಲ್ಲಿ ಸೋತ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಈಗ ದಿಕ್ಕೆಟ್ಟು ಕುಳಿತಿದ್ದಾರೆ. ನನಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ. ಕೆಕೆಆರ್ ವಿರುದ್ಧ ಗೆಲ್ಲಬೇಕಿದ್ದ ಪಂದ್ಯವನ್ನು ಕೊನೆಯ ಗಳಿಗೆಯಲ್ಲಿ ಕೈ ಚೆಲ್ಲಿದ ರಾಹುಲ್ ನಿರಾಸೆಯಲ್ಲಿದ್ದಾರೆ. ಜತೆಗೆ ಟ್ವಿಟರಿಗರೂ ರಾಹುಲ್- ಕೋಚ್ ಅನಿಲ್ ಕುಂಬ್ಳೆಗೆ ಟೀಕೆಗಳ ಸುರಿಮಳೆ ಸುರಿಸಿದ್ದಾರೆ.ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 164 ರನ್ ಗಳ ಮೊತ್ತ