ದುಬೈ: ಅಂತೂ ಇಂತೂ ಕೊರೋನಾ ನಡುವೆಯೂ ಐಪಿಎಲ್ 13 ಆಯೋಜನೆಯಾಗಿ ಇಂದು ಅಂತಿಮ ಹಂತಕ್ಕೆ ಬಂದಿದೆ. ಫೈನಲ್ಸ್ ನಲ್ಲಿ ಇಂದು ಮುಂಬೈ ಇಂಡಿಯನ್ಸ್-ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ. ರೋಹಿತ್ ಪಡೆ ಈಗಾಗಲೇ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ. ಹೀಗಾಗಿ ಇಂದು ಗೆದ್ದರೆ ಮತ್ತೊಂದು ಇತಿಹಾಸವಾಗಲಿದೆ. ಇನ್ನೊಂದೆಡೆ ಶ್ರೇಯಸ್ ಐಯರ್ ನೇತೃತ್ವದ ಯುವ ಡೆಲ್ಲಿ ಪಡೆಗೆ ಇದು ಮೊದಲ ಐಪಿಎಲ್ ಫೈನಲ್ಸ್. ಒಂದು ವೇಳೆ ಡೆಲ್ಲಿ ಇಂದು ಗೆದ್ದರೆ ಶ್ರೇಯಸ್ ಐಯರ್