ದುಬೈ: ಈ ಬಾರಿಯ ಐಪಿಎಲ್ ನಲ್ಲಿ ಕನ್ನಡಗಿರದ್ದೇ ಕಾರುಬಾರು ಎಂದರೆ ತಪ್ಪಾಗಲಾರದು. ಬ್ಯಾಟ್ಸ್ ಮನ್ ಗಳ ಪೈಕಿ ಗಮನ ಸೆಳೆಯುತ್ತಿರುವವರು ಬಹುತೇಕ ಕನ್ನಡಿಗರೇ. ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ದೇವದತ್ತ್ ಪಡಿಕ್ಕಲ್ ಅಗ್ರ ರನ್ ಗಳಿಕೆದಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅದರಲ್ಲೂ ವಿಶೇಷವಾಗಿ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಮತ್ತು ಗೆಳೆಯ ಮಯಾಂಕ್ ನಡುವೆ ಆರೆಂಜ್ ಕ್ಯಾಪ್ ಗೌರವ ಸಂಗೀತ ಕುರ್ಚಿಯಾಡುತ್ತಿದೆ. ಕಳೆದ ಪಂದ್ಯದಲ್ಲಿ ಆರೆಂಜ್ ಕ್ಯಾಪ್ ಗೌರವ ಪಡೆದಿದ್ದ