ಮುಂಬೈ: ಐಪಿಎಲ್ ನ್ನು ಇನ್ನಷ್ಟು ಆಕರ್ಷಣೀಯವಾಗಿಸಲು ಬಿಸಿಸಿಐ ಮುಂದಿನ ಆವೃತ್ತಿಗೆ ಎರಡು ಹೊಸ ತಂಡಗಳನ್ನು ಸೇರ್ಪಡೆಗೊಳಿಸಲು ಚಿಂತನೆ ನಡೆಸಿದೆ. ಇದಕ್ಕೆ ಎನ್ ಸಿಎ ನಿರ್ದೇಶಕರಾಗಿರುವ ‘ವಾಲ್’ ರಾಹುಲ್ ದ್ರಾವಿಡ್ ಬೆಂಬಲ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ಹಲವು ಯುವ ಪ್ರತಿಭೆಗಳಿವೆ. ಐಪಿಎಲ್ ತಂಡಗಳನ್ನು ಹೆಚ್ಚಿಸುವುದರಿಂದ ಈ ಯುವ ಪ್ರತಿಭೆಗಳಿಗೆ ಹೆಚ್ಚು ಅವಕಾಶ ಸಿಕ್ಕಂತಾಗುತ್ತದೆ. ಇದರಿಂದ ಅವರ ಭವಿಷ್ಯದ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ಮೊದಲೆಲ್ಲಾ ಯವ ಆಟಗಾರರು ರಣಜಿ, ದೇಶೀಯ ಕ್ರಿಕೆಟ್