ದುಬೈ: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಧಾರ ಸ್ತಂಬಗಳೆನಿಸಿಕೊಂಡಿರುವ ವಿರಾಟ್ ಕೊಹ್ಲಿ-ಎಬಿಡಿ ವಿಲಿಯರ್ಸ್ ಅತ್ಯುತ್ತಮ ಸ್ನೇಹಿತರು ಎನ್ನುವುದರಲ್ಲಿ ಸಂಶಯವಿಲ್ಲ. ಇಂತಿಪ್ಪ ಸ್ನೇಹಿತನನ್ನು ಕೊಹ್ಲಿ ಬಿಸ್ಕಟ್ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಾರಂತೆ. ಅದೇಕೆ ಗೊತ್ತಾ? ಬಿಸ್ಕಟ್ ಎಂದರೆ ದ.ಆಫ್ರಿಕಾ ಜಾನಪದ ಭಾಷೆಯಲ್ಲಿ ಅತ್ಯಂತ ಪ್ರೀತಿಪಾತ್ರ ಎಂದರ್ಥವಂತೆ. ತನಗೆ ಎಬಿಡಿ ಅತ್ಯಂತ ಪ್ರೀತಿ ಪಾತ್ರನಾಗಿರುವುದರಿಂದ ಅವರನ್ನು ಬಿಸ್ಕಟ್ ಎಂದೇ ಕರೆಯತ್ತೇನೆ. ಬಿಸ್ಕಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಎಂದು ಕೊಹ್ಲಿ