ಅನಿಲ್ ಕುಂಬ್ಳೆ, ಕೆಎಲ್ ರಾಹುಲ್ ಗೆ ಕೊಕ್ ಕೊಡುತ್ತಾ ಪಂಜಾಬ್?

ಮುಂಬೈ, ಶನಿವಾರ, 21 ನವೆಂಬರ್ 2020 (11:05 IST)

ಮುಂಬೈ: ಮುಂದಿನ ಐಪಿಎಲ್ ವೇಳೆಗೆ ಕೋಚ್ ಅನಿಲ್ ಕುಂಬ್ಳೆ ಮತ್ತು ನಾಯಕ ಕೆಎಲ್ ರಾಹುಲ್ ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೊಕ್ ಕೊಡುತ್ತಾ? ಈ ಬಗ್ಗೆ ಸಹ ಮಾಲಿಕ ನೆಸ್ ವಾಡಿಯಾ ಹೇಳಿದ್ದೇನು ಗೊತ್ತಾ?

 
ಐಪಿಎಲ್ 13 ರಲ್ಲಿ ಪ್ಲೇ ಆಫ್ ಹಂತಕ್ಕೇರಲು ವಿಫಲವಾಗಿದ್ದಕ್ಕೆ ರಾಹುಲ್ ಮತ್ತು ಅನಿಲ್ ಕುಂಬ್ಳೆಯನ್ನು ಕಿತ್ತೊಗೆಯಲು ಫ್ರಾಂಚೈಸಿ ಚಿಂತನೆ ನಡೆಸಿದೆ ಎಂಬ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ನೆಸ್ ವಾಡಿಯಾ ‘ಕುಂಬ್ಳೆ ಜತೆಗೆ ನಾವು ಮೂರು ವರ್ಷ ಒಪ್ಪಂದ ಮಾಡಿಕೊಳ್ಳಲು ಬಯಸಿದ್ದೆವು. ಈಗ ಒಂದು ವರ್ಷವಷ್ಟೇ ಕಳೆದಿದೆ. ರಾಹುಲ್ ಕೂಡಾ ಉತ್ತಮ ನಾಯಕ. ನಾವು ಪ್ಲೇ ಆಫ್ ಹಂತಕ್ಕೇರಲು ವಿಫಲರಾಗಿದ್ದು ಕೇವಲ 1 ಪಂದ್ಯದಿಂದ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಮತ್ತು ಡೆತ್ ಓವರ್ ಸ್ಪೆಷಲಿಸ್ಟ್ ಗಳ ಕೊರತೆಯಿಂದಾಗಿ ನಾವು ಸೋತೆವು. ಅದನ್ನು ಸರಿಪಡಿಸಬೇಕಿದೆ. ಆಗಾಗ ನಾಯಕತ್ವ ಬದಲಾವಣೆ ಮಾಡುವ ತಪ್ಪನ್ನೂ ನಾವು ತಿದ್ದಿಕೊಳ್ಳಬೇಕಾಗಿದೆ’ ಎನ್ನುವ ಮೂಲಕ ಇಬ್ಬರನ್ನೂ ಬದಲಾಯಿಸುವ ಚಿಂತನೆಯಿಲ್ಲ ಎಂದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  


ಇದರಲ್ಲಿ ಇನ್ನಷ್ಟು ಓದಿ :