ದುಬೈ: ಕೈಗೆ ಬಂದ ತುತ್ತು ಬಾಯಿಗೆ ಬರಲ್ಲ ಎನ್ನುವ ಮಾತಿದೆಯಲ್ಲಾ? ಅದು ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಗೆ ಈ ಐಪಿಎಲ್ ನಲ್ಲಿ ಪದೇ ಪದೇ ಅನುಭವವಾಗುತ್ತಿದೆ.ಒಳ್ಳೆಯ ಟೀಂ, ಒಳ್ಳೆಯ ಮೊತ್ತ, ಉತ್ತಮ ಬೌಲಿಂಗ್ ಪ್ರದರ್ಶಿಸಿದರೂ ಗೆಲುವು ಮಾತ್ರ ಮರೀಚಿಕೆಯಾಗುತ್ತಿದೆ. ಈ ಕೂಟದಲ್ಲಿ ಇದುವರೆಗೆ ಎರಡು ಪಂದ್ಯಗಳಲ್ಲಿ ಗೆಲುವಿನ ಹೊಸ್ತಿಲಿನಲ್ಲಿ ಎಡವಿರುವ ಪಂಜಾಬ್ ಹಾಗೂ ನಾಯಕ ಕೆಎಲ್ ರಾಹುಲ್ ಈಗ ಒತ್ತಡದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಹಿರಿಯ ಕ್ರಿಕೆಟಿಗ