ಪಂಜಾಬ್ ತಂಡದಲ್ಲಿ ಶಾರುಖ್ ಖಾನ್: ಕೋಚ್ ಅನಿಲ್ ಕುಂಬ್ಳೆ ಹೇಳಿದ್ದೇನು?

ಮೊಹಾಲಿ| Krishnaveni K| Last Modified ಮಂಗಳವಾರ, 6 ಏಪ್ರಿಲ್ 2021 (07:04 IST)
ಮೊಹಾಲಿ: ಶಾರುಖ್ ಖಾನ್ ಎಂದರೆ ಥಟ್ಟನೇ ಎಲ್ಲರಿಗೂ ನೆನಪಾಗುವುದು ಬಾಲಿವುಡ್ ಬಾದ್ ಶಹಾ ಶಾರುಖ್ ರನ್ನು. ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಸಹ ಮಾಲಿಕರಾಗಿರುವ ಶಾರುಖ್ ಖಾನ್ ಗೂ ಕಿಂಗ್ಸ್ ಪಂಜಾಬ್ ತಂಡಕ್ಕೂ ಏನು ಸಂಬಂಧ ಅಂತೀರಾ?

 
ಅಸಲಿಗೆ ಕಿಂಗ್ಸ್ ಪಂಜಾಬ್ ತಂಡದಲ್ಲಿರುವ ಶಾರುಖ್ ಖಾನ್ ನಟ ಶಾರುಖ್ ಖಾನ್ ಅಲ್ಲ. ಇವರು ಯುವ ಕ್ರಿಕೆಟಿಗ ಶಾರುಖ್ ಖಾನ್. ಈ ಯಂಗ್ ಕ್ರಿಕೆಟಿಗನಿಗೆ ಬಗ್ಗೆ ಕೋಚ್ ಅನಿಲ್ ಕುಂಬ್ಳೆ ಭರವಸೆಯ ಮಾತನಾಡಿದ್ದಾರೆ.
 
‘ಶಾರುಖ್ ಖಾನ್ ಆಡುವ ರೀತಿ ನೋಡಿದರೆ ಥೇಟ್ ವೆಸ್ಟ್ ಇಂಡೀಸ್ ದೈತ್ಯ ಕಿರನ್ ಪೊಲ್ಲಾರ್ಡ್ ನೆನಪಾಗುತ್ತದೆ. ಥೇಟ್ ಪೊಲ್ಲಾರ್ಡ್ ನಂತೇ ಬಿಗ್ ಹಿಟ್ಟಿಂಗ್ ಸಾಮರ್ಥ್ಯ ಇವರಲ್ಲಿಯೂ ಇದೆ’ ಎಂದು ಕುಂಬ್ಳೆ ಹೊಗಳಿದ್ದಾರೆ. ಈ ಶಾರುಖ್ ಖಾನ್ ತಮಿಳುನಾಡು ಮೂಲದವರು. ತಮಿಳುನಾಡು ಫ್ರಾಂಚೈಸಿ ಲೀಗ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಅವರನ್ನು ಹರಾಜಿನಲ್ಲಿ ಪಂಜಾಬ್ ತಂಡ ಖರೀದಿ ಮಾಡಿತ್ತು.
ಇದರಲ್ಲಿ ಇನ್ನಷ್ಟು ಓದಿ :