ಮುಂಬೈ: ಈ ವರ್ಷ ಐಪಿಎಲ್ ಪಂದ್ಯಾವಳಿ ಯಾವಾಗ ಆರಂಭವಾಗುತ್ತದೆ ಎಂಬ ಪ್ರಶ್ನೆಗಳಿಗೆ ಬಿಸಿಸಿಐ ಇದೀಗ ಉತ್ತರ ನೀಡಿದ್ದು, ಊಹಾಪೋಹಗಳಿಗೆ ತೆರೆ ಎಳೆದಿದೆ.ಈ ವರ್ಷ ಲೋಕಸಭೆ ಚುನಾವಣೆ ನಡೆಯುವುದರಿಂದ ಇದುವರೆಗೆ ಐಪಿಎಲ್ ವೇಳಾ ಪಟ್ಟಿ ಘೋಷಣೆಯಾಗಿಲ್ಲ. ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಐಪಿಎಲ್ ವೇಳಾಪಟ್ಟಿ ಘೋಷಣೆ ಮಾಡುವುದಾಗಿ ಬಿಸಿಸಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಈ ಮೊದಲು ಐಪಿಎಲ್ ವೇಳಾಪಟ್ಟಿ ಸದ್ಯದಲ್ಲೇ ಘೋಷಣೆಯಾಗಲಿದೆ. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ವೇಳಾಪಟ್ಟಿ ಬದಲಾಗಬಹುದು ಎಂದೆಲ್ಲಾ ಊಹಾಪೋಹಗಳು ಎದ್ದಿದ್ದವು.