ಮುಂಬೈ: ಐಪಿಎಲ್ 13 ರ ಟೈಟಲ್ ಪ್ರಾಯೋಜಕತ್ವದಿಂದ ವಿವೋ ಹಿಂದೆ ಸರಿಯುತ್ತಿದ್ದಂತೇ ಬಿಸಿಸಿಐಗೆ ಈಗ ಹೊಸ ಪ್ರಾಯೋಜಕರನ್ನು ಹುಡುಕುವ ತಲೆನೋವು ಶುರುವಾಗಿದೆ. ಅಲ್ಲಿ ನಷ್ಟವಾದ ದುಡ್ಡು ಬೇರೆ ಪ್ರಾಯೋಜಕರಿಂದ ಗಳಿಸಲು ಬಿಸಿಸಿಐ ಯೋಜನೆ ರೂಪಿಸಿದೆ.ವಿವೋ ಅಲ್ಲದೇ ಬೇರೆ ಕಂಪನಿಗಳೂ ಐಪಿಎಲ್ ನಲ್ಲಿ ಅಧಿಕೃತ ಪ್ರಾಯೋಜಕತ್ವ ವಹಿಸಿವೆ. ಈ ಸಂಸ್ಥೆಗಳಿಂದ ಸುಮಾರು 300 ಕೋಟಿ ರೂ.ಗಳಷ್ಟು ಲಾಭ ಜೇಬಿಗಿಳಿಸಲು ಬಿಸಿಸಿಐ ತಯಾರಿ ನಡೆಸಿದೆ.ಈ ನಡುವೆ ಟೈಟಲ್ ಪ್ರಾಯೋಜಕತ್ವಕ್ಕೂ ಬಿಡ್ ಸಲ್ಲಿಸಲು ಆಹ್ವಾನಿಸಿದ್ದು,