ಮುಂಬೈ: ಕೊರೋನಾ ಪ್ರಕರಣ ಹೆಚ್ಚಿದ ಕಾರಣ ಐಪಿಎಲ್ 14 ಕೂಟವನ್ನು ಮುಂದೂಡಲಾಗಿದೆ. ಐಪಿಎಲ್ ಮುಂದೂಡಿದ ಬಳಿಕ ಬಿಸಿಸಿಐ ಹೇಳಿಕೆ ನೀಡಿದೆ.‘ತುರ್ತು ಸಭೆ ನಡೆಸಿ ಐಪಿಎಲ್ ಆಡಳಿತ ಮಂಡಳಿ ಈ ಕೂಟವನ್ನು ಮುಂದೂಡಲು ತೀರ್ಮಾನಿಸಿದೆ. ಇದು ಎಲ್ಲರ ಆರೋಗ್ಯ, ಸುರಕ್ಷತೆಯ ದೃಷ್ಟಿಯಲ್ಲಿ ಕೈಗೊಂಡ ನಿರ್ಧಾರವಾಗಿದೆ. ಈ ಕಠಿಣ ಪರಿಸ್ಥಿತಿಯಲ್ಲೂ ಭಾರತದ ಜನರನ್ನು ಚಿಯರ್ ಅಪ್ ಮಾಡಲು ಪ್ರಯತ್ನಿಸಿದೆವು. ಆದರೆ ಈಗ ಟೂರ್ನಮೆಂಟ್ ಮುಂದೂಡದೇ ಬೇರೆ ದಾರಿಯಿಲ್ಲ’ ಎಂದು ಬಿಸಿಸಿಐ ಹೇಳಿಕೆ ನೀಡಿದೆ.ಕೊರೋನಾ