ಕೊರೋನಾ ಆತಂಕ: ಮುಂಬೈಗೆ ಎಲ್ಲಾ ಪಂದ್ಯ ಶಿಫ್ಟ್?

ಮುಂಬೈ| Krishnaveni K| Last Modified ಮಂಗಳವಾರ, 4 ಮೇ 2021 (09:49 IST)
ಮುಂಬೈ: ಕೂಟದ ಮೇಲೆ ಕೊರೋನಾ ಕರಿನೆರಳು ಬೀರಿದೆ. ಇದರಿಂದಾಗಿ ಎಲ್ಲಾ ಪಂದ್ಯಗಳನ್ನೂ ಮುಂಬೈಗೆ ಶಿಫ್ಟ್ ಮಾಡುವ ಬಗ್ಗೆ ಚಿಂತನೆ ನಡೆಸಿದೆ.
 

ಕೆಕೆಆರ್ ತಂಡದ ಇಬ್ಬರು ಕ್ರಿಕೆಟಿಗರಿಗೆ ಕೊರೋನಾ ಕಾಣಿಸಿಕೊಂಡ ಹಿನ್ನಲೆಯಲ್ಲಿ ನಿನ್ನೆ ನಡೆಯಬೇಕಿದ್ದ ಆರ್ ಸಿಬಿ ವಿರುದ್ಧದ ಪಂದ್ಯ ಮುಂದೂಡಿಕೆಯಾಗಿತ್ತು. ಇತರ ಪಂದ್ಯಗಳೂ ಇದೀಗ ಮುಂದೂಡಿಕೆಯಾಗುವ ಭೀತಿಯಲ್ಲಿದೆ.
 
ಬೇರೆ ಬೇರೆ ಸ್ಥಳಗಳಿಗೆ ತೆರಳುವಾಗ ಕ್ರಿಕೆಟಿಗರಿಗೆ ಸೋಂಕಿನ ಭೀತಿ ಹೆಚ್ಚು. ಹೀಗಾಗಿ ಮುಂಬೈನಲ್ಲೇ ಎಲ್ಲಾ ತಂಡಗಳನ್ನೂ ಬಯೋ ಬಬಲ್ ವಾತಾವರಣದಲ್ಲಿರಿಸಿ ಅಲ್ಲಿಯೇ ಎಲ್ಲಾ ಪಂದ್ಯಗಳನ್ನೂ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ.
ಇದರಲ್ಲಿ ಇನ್ನಷ್ಟು ಓದಿ :