ಗೊತ್ತೇ ಆಗದೇ ಆರ್ ಸಿಬಿಯಲ್ಲಿ ಬದಲಾವಣೆ: ಟ್ವಿಟರ್ ನಲ್ಲಿ ವಿರಾಟ್ ಕೊಹ್ಲಿ ಅಸಮಾಧಾನ

ಬೆಂಗಳೂರು| Krishnaveni K| Last Modified ಗುರುವಾರ, 13 ಫೆಬ್ರವರಿ 2020 (10:53 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ದಿಡೀರ್ ಆಗಿ ತನ್ನ ಲೋಗೋ, ತಂಡದ ಹೆಸರು ಬದಲಾಯಿಸಿಕೊಂಡಿದ್ದರ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

 
ತಂಡದ ಹೆಸರಿನಲ್ಲಿದ್ದ ಬೆಂಗಳೂರು ತೆಗೆದು ಕೇವಲ ರಾಯಲ್ ಚಾಲೆಂಜರ್ಸ್ ಎಂದು ಉಳಿಸಿಕೊಳ್ಳಲಾಗಿದ್ದು, ಲೋಗೋ ಕೂಡಾ ಬದಲಾಯಿಸಲಾಗಿದೆ. ಆದರೆ ಈ ಬಗ್ಗೆ ಕೊಹ್ಲಿಗೆ ತಿಳಿಸಿಯೇ ಇರಲಿಲ್ಲವಂತೆ!
 
ಈ ಬಗ್ಗೆ ಟ್ವೀಟ್ ಮಾಡಿರುವ ಕೊಹ್ಲಿ ‘ಪೋಸ್ಟ್ ಗಳು ಕಾಣೆಯಾಗಿವೆ ಮತ್ತು ನಾಯಕನಿಗೇ ತಿಳಿಸಿಲ್ಲ! ಆರ್ ಸಿಬಿ ನಿಮಗೆ ಏನಾದರೂ ಸಹಾಯ ಬೇಕಿದ್ದರೆ ನನಗೆ ತಿಳಿಸಿ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಮಾತ್ರವಲ್ಲದೆ, ಆರ್ ಸಿಬಿ ಪರ ಆಡುವ ಟೀಂ ಇಂಡಿಯಾ ಬೌಲರ್ ಯಜುವೇಂದ್ರ ಚಾಹಲ್ ಕೂಡಾ ಇದಕ್ಕೆ ಪ್ರತಿಕ್ರಿಯಿಸಿದ್ದು, ‘ಅರೇ ಇದ್ಯಾವ ಥರಾ ಗೂಗ್ಲಿ? ನಿಮ್ಮ ಪ್ರೊಫೈಲ್ ಫೋಟೋ, ಇನ್ ಸ್ಟಾಗ್ರಾಂ ಪೋಸ್ಟ್ ಗಳೆಲ್ಲಾ ಏನಾದವು?’ ಎಂದು ಅಚ್ಚರಿ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಆರ್ ಸಿಬಿ ತಂಡದಲ್ಲಿ ಆಗಿರುವ ಈ ದಿಡೀರ್ ಬೆಳವಣಿಗೆ ಆಟಗಾರರಿಗೇ ಅಚ್ಚರಿ ತಂದಿದೆ.
ಇದರಲ್ಲಿ ಇನ್ನಷ್ಟು ಓದಿ :