ಮುಂಬೈ: ಕಳಪೆ ಪ್ರದರ್ಶನ ಹಿನ್ನಲೆಯಲ್ಲಿ ತಂಡದ ನಾಯಕತ್ವವನ್ನು ಮತ್ತೆ ತಮಗೇ ಮರಳಿಸಿದ ರವೀಂದ್ರ ಜಡೆಜಾ ನಿರ್ಧಾರದ ಬಗ್ಗೆ ಧೋನಿ ನಿನ್ನೆಯ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.‘ಕಳೆದ ಬಾರಿಯೇ ಜಡೇಜಾಗೆ ಮುಂದಿನ ಋತುವಿನಿಂದ ತಾವೇ ನಾಯಕ ಎನ್ನುವುದು ಗೊತ್ತಿತ್ತು. ಹಾಗಿದ್ದರೂ ಈ ಬಾರಿ ಮೊದಲ ಎರಡು ಪಂದ್ಯದಲ್ಲಿ ನಾನು ಅವರ ಕೆಲಸಕ್ಕೆ ಸಹಾಯ ಮಾಡಿದೆ. ಅವರೇ ನಿರ್ಧಾರ ತೆಗೆದುಕೊಳ್ಳಲಿ ಎಂದು ಬಯಸಿದೆ. ಎಲ್ಲವನ್ನೂ ಹೇಳಿಕೊಡಲಾಗದು. ನಾಯಕನಾದ ತಕ್ಷಣ ಜವಾಬ್ಧಾರಿ ಹೆಚ್ಚುತ್ತದೆ. ಅದು ಆಟದ