Widgets Magazine

ಐಪಿಎಲ್ ಗೂ ಮೊದಲು ಕ್ರಿಕೆಟಿಗರಿಗೆ ನಡೆಯಲಿದೆ ಕೊರೋನಾ ಟೆಸ್ಟ್

ಮುಂಬೈ| Krishnaveni K| Last Modified ಶುಕ್ರವಾರ, 31 ಜುಲೈ 2020 (10:48 IST)
ಮುಂಬೈ: ಐಪಿಎಲ್ 13 ಆಡಲು ಮುಂದಿನ ತಿಂಗಳೇ ಯುಎಇಗೆ ತೆರಳಲಿರುವ ಕ್ರಿಕೆಟಿಗರು ಕಡ್ಡಾಯವಾಗಿ ಕೊರೋನಾ ಟೆಸ್ಟ್ ಗೊಳಗಾಗಲಿದ್ದಾರೆ.

 

ಟೂರ್ನಮೆಂಟ್ ನಲ್ಲಿ ಕೊರೋನಾ ಕರಿನೆರಳು ಬಾರದಂತೆ ಬಿಸಿಸಿಐ ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದೆ. ಇದಕ್ಕಾಗಿ ತಯಾರಿಯನ್ನೂ ನಡೆಸುತ್ತಿದೆ. ಅದರ ಭಾಗವಾಗಿ ಕೊರೋನಾ ಟೆಸ್ಟ್ ನಡೆಯಲಿದೆ.
 
ಆಟಗಾರರ ಜತೆ ಅವರ ಕುಟುಂಬಕ್ಕೂ ಯುಎಇಗೆ ತೆರಳಲು ಅವಕಾಶ ನೀಡುವ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನವಾಗಲಿದೆ. ಒಂದು ವೇಳೆ ಕುಟುಂಬದವರೂ ತೆರಳುವುದಿದ್ದರೆ ಅವರಿಗೂ ಕೊರೋನಾ ಪರೀಕ್ಷೆ ನಡೆಸಲಾಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :