ಸಿಎಸ್ ಕೆ ನೆಟ್ಸ್ ನಲ್ಲಿ ಧೋನಿ ಭರ್ಜರಿ ಬ್ಯಾಟಿಂಗ್

ಮುಂಬೈ| Krishnaveni K| Last Modified ಗುರುವಾರ, 8 ಏಪ್ರಿಲ್ 2021 (08:44 IST)
ಮುಂಬೈ: ಕ್ಕೆ ತಯಾರಿ ನಡೆಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ನೆಟ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

 
ಧೋನಿ ಸ್ಕ್ವೇರ್ ಕಟ್, ಸಿಕ್ಸರ್ ಗಳ ಮೂಲಕ ಐಪಿಎಲ್ 14 ಕ್ಕೆ ತಾವು ತಯಾರಾಗಿರುವುದಾಗಿ ಎದುರಾಳಿಗಳಿಗೆ ಸೂಚನೆ ಕೊಟ್ಟಿದ್ದಾರೆ. ವಿಶೇಷವೆಂದರೆ ಧೋನಿ ಈ ವಿಡಿಯೋದಲ್ಲಿ ತಮ್ಮ ಸಾಥಿ ಸುರೇಶ್ ರೈನಾ ಜೊತೆಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ.
 
ನಾಳೆಯಿಂದ ಐಪಿಎಲ್ ಗೆ ವಿದ್ಯುಕ್ತ ಚಾಲನೆ ಸಿಗಲಿದ್ದು, ಏಪ್ರಿಲ್ 10 ರಂದು ಚೆನ್ನೈ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ. ಈ ಬಾರಿ ಚೆನ್ನೈಗೆ ರಾಬಿನ್ ಉತ್ತಪ್ಪ, ಮೊಯಿನ್ ಅಲಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಇವರ ಪೈಕಿ ಮೊಯಿನ್ ಆಲ್ ರೌಂಡರ್ ಆಗಿದ್ದು, ಇತ್ತೀಚೆಗೆ ಮುಕ್ತಾಯ ಕಂಡಿದ್ದ ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಹೊಡೆಬಡಿಯ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದರು.
ಇದರಲ್ಲಿ ಇನ್ನಷ್ಟು ಓದಿ :