ಮುಂಬೈ: ಕೊರೋನಾ ಪ್ರಕರಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಬೇಕಿದ್ದ ಐಪಿಎಲ್ ಪಂದ್ಯವಾಡದೇ ಇರಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿರ್ಧರಿಸಿದೆ.ಈ ಬಗ್ಗೆ ಈಗಾಗಲೇ ಬಿಸಿಸಿಐಗೆ ಮಾಹಿತಿ ನೀಡಿದೆ ಎನ್ನಲಾಗಿದೆ. ಚೆನ್ನೈ ತಂಡದಲ್ಲೂ ಇಬ್ಬರಲ್ಲಿ ಕೊರೋನಾ ಕಾಣಿಸಿಕೊಂಡಿತ್ತು. ಆದರೆ ಕ್ರಿಕೆಟಿಗರು ಸುರಕ್ಷಿತವಾಗಿದ್ದಾರೆ.ಹೀಗಾಗಿ ದೆಹಲಿಯಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಆಡದೇ ಇರಲು ಸಿಎಸ್ ಕೆ ತೀರ್ಮಾನಿಸಿದೆ ಎಂದು ವರದಿಗಳು ಹೇಳಿವೆ. ಈ ಪಂದ್ಯವನ್ನು ಮುಂದೂಡುವಂತೆ ಬಿಸಿಸಿಐಗೆ ಮನವಿ ಮಾಡಿದೆ ಎನ್ನಲಾಗಿದೆ.