ಡೇವಿಡ್ ವಾರ್ನರ್ ಗೆ ಹೈದರಾಬಾದ್ ಅವಮಾನ: ತಿರುಗಿಬಿದ್ದ ಸಹೋದರ

ಹೈದರಾಬಾದ್| Krishnaveni K| Last Modified ಸೋಮವಾರ, 3 ಮೇ 2021 (10:52 IST)
ಹೈದರಾಬಾದ್: ಡೇವಿಡ್ ವಾರ್ನರ್ ರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವದಿಂದ ಕೊಕ್ ನೀಡಿದ್ದಲ್ಲದೆ, ತಂಡದ ಆಡುವ ಬಳಗದಿಂದಲೂ ಕೈ ಬಿಟ್ಟು ಅವಮಾನ ಮಾಡಿದ್ದಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ವಾರ್ನರ್ ಸಹೋದರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 
ಓಪನರ್ ಗಳು ತಂಡಕ್ಕೆ ಸಮಸ್ಯೆಯೇ ಆಗಿರಲಿಲ್ಲ. ಮಧ್ಯಮಕ್ರಮಾಂಕದಲ್ಲಿ ಬ್ಯಾಟ್ಸ್ ಮನ್ ಗಳು ರನ್ ಗಳಿಸುತ್ತಿರಲಿಲ್ಲ. ಹಾಗಿದ್ದ ಮೇಲೆ ವಾರ್ನರ್ ರನ್ನು ಯಾಕೆ ಕೈ ಬಿಟ್ಟರು ಎಂದು ಅವರ ಸಹೋದರ ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಇನ್ನು, ವಾರ್ನರ್ ಗೆ ಬಹುಶಃ ಹೈದರಾಬಾದ್ ತಂಡದಲ್ಲಿ ಇದುವೇ ಕೊನೆಯ ಐಪಿಎಲ್ ಆಗಬಹುದು ಎಂದು ದ.ಆಫ್ರಿಕಾ ಮಾಜಿ ವೇಗಿ ಡೇಲ್ ಸ್ಟೈನ್ ಅಭಿಪ್ರಾಯಪಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :