ಆರ್ ಸಿಬಿಗೆ ಬಿಗ್ ಶಾಕ್: ದೇವದತ್ತ್ ಪಡಿಕ್ಕಲ್ ಗೆ ಕೊರೋನಾ

ಚೆನ್ನೈ| Krishnaveni K| Last Modified ಭಾನುವಾರ, 4 ಏಪ್ರಿಲ್ 2021 (10:13 IST)
ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಲ್ಲಿ ಬಹುದೊಡ್ಡ ಶಾಕ್ ಸಿಕ್ಕಿದೆ. ಪ್ರಮುಖ ಓಪನರ್ ದೇವದತ್ತ್ ಪಡಿಕ್ಕಲ್ ಗೆ ಕೊರೋನಾ ಪಾಸಿಟಿವ್ ಆಗಿದೆ.

 
ಟೂರ್ನಿ ಆರಂಭಕ್ಕೆ ನಾಲ್ಕು ದಿನಗಳ ಮೊದಲು ಪಡಿಕ್ಕಲ್ ಗೆ ಕೊರೋನಾ ದೃಢಪಟ್ಟಿರುವುದು ತಂಡಕ್ಕೆ ಬಹುದೊಡ್ಡ ಶಾಕ್ ಆಗಿದೆ. ಬಯೋಬಬಲ್ ವಾತಾವರಣದಲ್ಲಿದ್ದರೂ ಆಟಗಾರರು ಒಬ್ಬರಾದ ಮೇಲೊಬ್ಬರಂತೆ ಕೊರೋನಾ ಸೋಂಕಿತರಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
 
ಚೆನ್ನೈನಲ್ಲಿ ಬೀಡುಬಿಟ್ಟಿರುವ ಆರ್ ಸಿಬಿ ತಂಡ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಬೇಕಿದೆ. ಇದೀಗ ಪಡಿಕ್ಕಲ್ ಕೊರೋನಾ ಸೋಂಕಿತರಾಗಿರುವುದರಿಂದ ತಂಡದ ಇತರ ಆಟಗಾರರಿಂದ ಪ್ರತ್ಯೇಕವಾಗುಳಿದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :