ನಾನೂ ವಿರಾಟ್ ಕೊಹ್ಲಿಯಂತಾಗಬೇಕು: ದೇವದತ್ತ್ ಪಡಿಕ್ಕಲ್

ಚೆನ್ನೈ| Krishnaveni K| Last Modified ಮಂಗಳವಾರ, 6 ಏಪ್ರಿಲ್ 2021 (07:22 IST)
ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ಆಡುವ ಕನ್ನಡಿಗ ಬ್ಯಾಟ್ಸ್ ಮನ್ ದೇವದತ್ತ್ ಪಡಿಕ್ಕಲ್ ಕೊರೋನಾದಿಂದ ಸುಧಾರಿಸುತ್ತಿದ್ದಾರೆ.

 
ಇತ್ತೀಚೆಗಷ್ಟೇ ದೇವದತ್ತ್ ಪಡಿಕ್ಕಲ್ ಗೆ ಕೊರೋನಾ ಸೋಂಕು ತಗುಲಿತ್ತು. ಇದೀಗ ಅವರು ಮತ್ತೊಮ್ಮೆ ಪರೀಕ್ಷೆಗೊಳಪಡಬೇಕಿದೆ. ಈ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದರೆ ಮಾತ್ರ ಅವರು ಅಭ್ಯಾಸಕ್ಕಿಳಿಯಬಹುದಾಗಿದೆ.
 
ಇನ್ನು ತಮ್ಮ ವೃತ್ತಿ ಬದುಕಿನ ಬಗ್ಗೆ ಮಾತನಾಡಿರುವ ದೇವದತ್ತ್ ಪಡಿಕ್ಕಲ್ ತನಗೂ ವಿರಾಟ್ ಕೊಹ್ಲಿಯಂತಾಗುವ ಆಸೆ ಎಂದಿದ್ದಾರೆ. ವಿರಾಟ್ ಮತ್ತು ಎಬಿಡಿಯಿಂದ ಸಾಕಷ್ಟು ಕಲಿತೆ. ಅವರು ಒತ್ತಡ ನಿಭಾಯಿಸುವ ರೀತಿಯನ್ನು ನಾನು ಕಲಿಯಬೇಕಿದೆ. ಅವರು ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ನನಗೂ ಅವರಂತೇ ಆಗುವಾಸೆ’ ಎಂದು ಪಡಿಕ್ಕಲ್ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :