ಚೆನ್ನೈ: ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯುಎಇಗೆ ಪ್ರಯಾಣ ಬೆಳೆಸಿದೆ. ಈ ನಡುವೆ ಧೋನಿ ತಮ್ಮ ಸೀಟ್ ನ್ನು ವಿಮಾನದಲ್ಲಿ ಸಿಎಸ್ ಕೆ ತಂಡದ ನಿರ್ದೇಶಕರಿಗೆ ಬಿಟ್ಟುಕೊಟ್ಟು ಸುದ್ದಿಯಾಗಿದ್ದಾರೆ.ಧೋನಿ ನಾಯಕರಾಗಿರುವ ಕಾರಣ ತಂಡದ ಜತೆ ಪ್ರಯಾಣ ಬೆಳೆಸುವಾಗ ಅವರಿಗೆ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ಸೀಟ್ ನ ಸೌಲಭ್ಯ ಸಿಗುತ್ತದೆ. ಆದರೆ ಧೋನಿ ಯಾವತ್ತೂ ಇದನ್ನು ಬಳಸಿಕೊಳ್ಳದೇ ತಮ್ಮ ಸೀಟ್ ನ್ನು ಇನ್ನೊಬ್ಬರಿಗೆ