ದುಬೈ: ಐಪಿಎಲ್ ನಲ್ಲಿ ಧೋನಿ ಮುಂದಿನ ವರ್ಷವೂ ಹಳದಿ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಾರಾ? ಈ ಪ್ರಶ್ನೆಗೆ ನಿನ್ನೆಯ ಫೈನಲ್ ಪಂದ್ಯದ ಬಳಿಕ ಧೋನಿ ಉತ್ತರಿಸಿದ್ದಾರೆ.ಐಪಿಎಲ್ ನಲ್ಲಿ ಮುಂದಿನ ವರ್ಷ ತಾವು ಆಡುವ ಬಗ್ಗೆ ಪ್ರಶ್ನೆ ಬಂದಾಗ ಧೋನಿ, ಏನೇ ಮಾಡಿದರೂ ನಾವು ಸಿಎಸ್ ಕೆ ಒಳಿತಿಗಾಗಿ ನಿರ್ಧಾರ ಮಾಡಲಿದ್ದೇವೆ ಎಂದಿದ್ದಾರೆ.‘ಮುಂದಿನ ವರ್ಷ ಯಾವ ತಂಡದಲ್ಲಿ ಆಡುತ್ತೇವೆ ಎನ್ನುವುದು ಬಿಸಿಸಿಐ ಮೇಲೆ ನಿರ್ಧಾರವಾಗಿದೆ. ಸಿಎಸ್ ಕೆಗೆ ಯಾವುದು ಒಳ್ಳೆಯದು ಎಂಬುದನ್ನು ನಿರ್ಧರಿಸಬೇಕಿದೆ.