ಮುಂಬೈ: ವೈಯಕ್ತಿಕ ಕಾರಣ ನೀಡಿ ಐಪಿಎಲ್ 13 ರಿಂದ ಹೊರಬಂದಿರುವ ಸುರೇಶ್ ರೈನಾ ಮತ್ತೆ ಸಿಎಸ್ ಕೆ ಮರಳುವ ಕುರಿತು ನಾಯಕ ಧೋನಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ.ಈ ಮೊದಲೂ ಸಿಎಸ್ ಕೆ ಮಾಲಿಕ ಶ್ರೀನಿವಾಸನ್ ಇದನ್ನೇ ಹೇಳಿದ್ದರು. ಅದರ ಬೆನ್ನಲ್ಲೇ ರೈನಾ ಮತ್ತೆ ತಂಡವನ್ನು ಕೂಡಿಕೊಳ್ಳಬಹುದು ಎಂಬ ಸುದ್ದಿ ಹಬ್ಬಿತ್ತು. ಅದಕ್ಕೆ ತಕ್ಕಂತೆ ರೈನಾ ಈಗ ಮತ್ತೆ ವರ್ಕೌಟ್ ಆರಂಭಿಸಿದ್ದು, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.