Widgets Magazine

ಆರ್ ಸಿಬಿ ಥೀಮ್ ಹಾಡಿನಲ್ಲಿ ಕನ್ನಡಕ್ಕಾಗಿ ಹುಡುಕಾಡಬೇಕು! ಫ್ಯಾನ್ಸ್ ಗರಂ

ದುಬೈ| Krishnaveni K| Last Modified ಶುಕ್ರವಾರ, 18 ಸೆಪ್ಟಂಬರ್ 2020 (12:41 IST)
ದುಬೈ: ಗೆ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತಂಡದ ಥೀಮ್ ಹಾಡನ್ನು ಲಾಂಚ್ ಮಾಡಿದೆ. ಆದರೆ ಹಾಡು ಕೇಳಿದ ಅಭಿಮಾನಿಗಳು ಗರಂ ಆಗಿದ್ದಾರೆ.
 

ಕಾರಣ ಹೆಸರಿಗೆ ಬೆಂಗಳೂರು ತಂಡವಾದರೂ ಥೀಮ್ ಹಾಡಿನಲ್ಲಿ ಕನ್ನಡ ಪದಕ್ಕಿಂತ ಇಂಗ್ಲಿಷ್, ಹಿಂದಿ ಪದದ ಬಳಕೆಯೇ ಹೆಚ್ಚಿದೆ. ಆರಂಭದ ಎರಡು ಸಾಲುಗಳು ಬಿಟ್ಟರೆ ಮಿಕ್ಕೆಲ್ಲಾ ಹಿಂದಿ ಮತ್ತು ಇಂಗ್ಲಿಷ್ ನಲ್ಲಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಬೇರೆಲ್ಲಾ ತಂಡಗಳು ತವರಿನ ಭಾಷೆಗೆ ಪ್ರಾಧಾನ್ಯತೆ ನೀಡುವಾಗ ಬೆಂಗಳೂರು ತಂಡ ಮಾತ್ರ ಯಾಕೆ ನೀಡಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :