ಮುಂಬೈ: ಭಾರತ-ಚೀನಾ ಗಡಿಯಲ್ಲಿ ಸೇನೆಗಳ ನಡುವೆ ಘರ್ಷಣೆಯಾದ ಬೆನ್ನಲ್ಲೇ ಭಾರತದಲ್ಲಿ ಚೀನಾ ವಸ್ತುಗಳ ಬಹಿಷ್ಕಾರದ ಕೂಗು ಹೆಚ್ಚಾಗಿದೆ. ಈ ನಡುವೆ ಬಿಸಿಸಿಐ ಕೂಡಾ ಐಪಿಎಲ್ ಪ್ರಾಯೋಜಕತ್ವ ಬದಲಿಸುವ ಚಿಂತನೆ ನಡೆಸಿದೆ.ಐಪಿಎಲ್ ಗೆ ಚೀನಾ ಮೂಲದ ಕಂಪನಿ ವಿವೋ ಪ್ರಾಯೋಜಕತ್ವ ವಹಿಸಿದೆ. ಈಗ ಐಪಿಎಲ್ ಪ್ರಾಯೋಜಕತ್ವ ಬದಲಾಯಿಸದೇ ಇದ್ದಲ್ಲಿ ಅಭಿಮಾನಿಗಳ ಆಕ್ರೋಶ ಹೆಚ್ಚಾಗಲಿದೆ. ಹೀಗಾಗಿ ಐಪಿಎಲ್ ಆಡಳಿತ ಮಂಡಳಿ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ಪ್ರಾಯೋಜಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಸಲಿದೆ.ಈ