Widgets Magazine

ಐಪಿಎಲ್ 13: ಆರ್ ಸಿಬಿಯಲ್ಲಿ ಈ ಬಾರಿ ಮ್ಯಾಚ್ ವಿನ್ನರ್ ಇವರೇ!

ದುಬೈ| Krishnaveni K| Last Modified ಶುಕ್ರವಾರ, 18 ಸೆಪ್ಟಂಬರ್ 2020 (11:34 IST)
ದುಬೈ: ಗೆ ಸಿದ್ಧವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಈ ಬಾರಿಯ ಮ್ಯಾಚ್ ವಿನ್ನರ್ ಯಾರು, ಆರಂಭಿಕರು ಯಾರಾದರೆ ಸೂಕ್ತ ಎಂಬ ಬಗ್ಗೆ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

 
ಇಲ್ಲಿನ ನಿಧಾನಗತಿಯ ಪಿಚ್ ನಲ್ಲಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಆರ್ ಸಿಬಿಗೆ ಮ್ಯಾಚ್ ವಿನ್ನರ್ ಆಗಬಹುದು. ಆರ್ ಸಿಬಿಯ ಟ್ರಂಪ್ ಕಾರ್ಡ್ ಈ ಬಾರಿ ಅವರೇ ಆಗಲಿದ್ದಾರೆ ಎಂದು ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ. ಇನ್ನು, ಆರ್ ಸಿಬಿಗೆ ಇದುವರೆಗೆ ಉತ್ತಮ ಆರಂಭಿಕರ ಕೊರತೆಯಿದೆ. ಇದುವರೆಗೆ ಓಪನರ್ ಆಗಿದ್ದ ಪಾರ್ಥಿವ್ ಪಟೇಲ್, ಏರಾನ್ ಫಿಂಚ್ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ ತಂಡದ ಬ್ಯಾಟಿಂಗ್ ಆಧಾರ ಸ್ತಂಬಗಳಾದ ಎಬಿಡಿ ವಿಲಿಯರ್ಸ್, ವಿರಾಟ್ ಕೊಹ್ಲಿ ಆರಂಭಿಕರಾಗಿ ಹೊಸ ಚೆಂಡನ್ನು ಎದುರಿಸಬೇಕು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :