ವೈರಲ್ ಆಗುತ್ತಿದೆ ಡ್ರೀಮ್ ಇಲೆವೆನ್ ಐಪಿಎಲ್ 13 ಜಾಹೀರಾತು

ದುಬೈ| Krishnaveni K| Last Modified ಮಂಗಳವಾರ, 15 ಸೆಪ್ಟಂಬರ್ 2020 (11:53 IST)
ದುಬೈ: ಐಪಿಎಲ್ ಆರಂಭವಾಗಲು ಕೆಲವೇ ದಿನ ಬಾಕಿಯಿದ್ದು, ಇದಕ್ಕೂ ಮೊದಲು ಪ್ರಮುಖ ಪ್ರಾಯೋಜಕರಾದ ಡ್ರೀಮ್ 11 ಹರಿಯಬಿಟ್ಟಿರುವ ಜಾಹೀರಾತೊಂದು ವೈರಲ್ ಆಗಿದೆ.
 

ಈ ಪ್ರಚಾರ ಜಾಹೀರಾತಿನಲ್ಲಿ ರೋಹಿತ್ ಶರ್ಮಾ, ಧೋನಿ, ಹಾರ್ದಿಕ್ ಪಾಂಡ್ಯ, ಶಿಖರ್ ಧವನ್, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಪ್ರಮುಖ ಕ್ರಿಕೆಟಿಗರು ಗಲ್ಲಿ ಕ್ರಿಕೆಟ್ ಆಡುವ ದೃಶ್ಯವಿದೆ. ಈ ಜಾಹೀರಾತಿನ ಜತೆಗೆ ಕ್ರಿಕೆಟಿಗರು ತಾವು ಗಲ್ಲಿಗಳಲ್ಲಿ  ಕ್ರಿಕೆಟ್ ಆಡುತ್ತಿದ್ದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :