ದುಬೈ: ಐಪಿಎಲ್ 13 ಆರಂಭಕ್ಕೆ ಇನ್ನೇನು ಎರಡೇ ವಾರ ಬಾಕಿಯಿದ್ದು, ಎಲ್ಲಾ ತಂಡಗಳು ತಮ್ಮ ಪಾಲಿನ ಲೆಕ್ಕಾಚಾರ ಶುರು ಮಾಡಿವೆ. ಈ ಬಾರಿ ಅತೀ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಹಕ್ಕುದಾರರಾಗಬಲ್ಲ ಆಟಗಾರರು ಯಾರಿರಬಹುದು?ಭಾರತೀಯ ಆಟಗಾರರ ಪೈಕಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮುಂಚೂಣಿಯಲ್ಲಿದ್ದಾರೆ. ಈ ಆಟಗಾರರು ಮತ್ತೆ ತಮ್ಮ ಬಹುದಿನಗಳ ರನ್ ದಾಹ ತೀರಿಸಿಕೊಳ್ಳಲು ಐಪಿಎಲ್ ನ್ನು ವೇದಿಕೆ ಮಾಡುವುದು ಖಚಿತ.ವಿದೇಶೀ