ಐಪಿಎಲ್ 14 ದಿನಾಂಕ ಪ್ರಕಟ: ಎಲ್ಲಿ, ಯಾವಾಗ?

ಮುಂಬೈ| Krishnaveni K| Last Modified ಭಾನುವಾರ, 7 ಮಾರ್ಚ್ 2021 (09:26 IST)
ಮುಂಬೈ: ರ ದಿನಾಂಕ ಪ್ರಕಟಣೆಯಾಗಿದೆ. ಏಪ್ರಿಲ್ 9 ರಿಂದ ಮೇ 30 ರವರೆಗೆ ಆರು ಮೈದಾನಗಳಲ್ಲಿ ಐಪಿಎಲ್ 14 ನಡೆಯಲಿದೆ ಎಂದು ಪ್ರಕಟಿಸಿದೆ.
 > ಒಟ್ಟು 52 ದಿನಗಳ ಕಾಲ ಐಪಿಎಲ್ 14 ಕೂಟ ನಡೆಯಲಿದ್ದು, 60 ಪಂದ್ಯಗಳಿರಲಿವೆ. ಈ ಬಾರಿ ಭಾರತದಲ್ಲೇ ಕೂಟ ನಡೆಯುತ್ತಿದೆ. ಅಹಮ್ಮದಾಬಾದ್ ನಲ್ಲಿ ಅಂತಿಮ ಘಟ್ಟದ ಪಂದ್ಯಗಳು ನಡೆಯಲಿವೆ. ಉಳಿದಂತೆ ಚೆನ್ನೈ, ಬೆಂಗಳೂರು, ನವದೆಹಲಿ, ಕೋಲ್ಕೊತ್ತಾ, ಮತ್ತು ಮುಂಬೈಯಲ್ಲಿ ಪಂದ್ಯಗಳು ನಡೆಯಲಿವೆ.>   ಕಳೆದ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿ ಮುಂಬೈ ಜೊತೆಗೆ ಆರಂಭಿಕ ಪಂದ್ಯವಾಡುವ ತಂಡ ಯಾವುದು ಎಂದು ಸದ್ಯದಲ್ಲೇ ತಿಳಿದುಬರಲಿದೆ. ಜೊತೆಗೆ ವೇಳಾಪಟ್ಟಿಯನ್ನೂ ಬಿಸಿಸಿಐ ಸದ್ಯದಲ್ಲೇ ಹೊರಹಾಕಲಿದೆ.ಇದರಲ್ಲಿ ಇನ್ನಷ್ಟು ಓದಿ :