ಐಪಿಎಲ್ 14: ನಿರೀಕ್ಷಿಸಿದಷ್ಟು ರನ್ ಗಳಿಸದ ಡೆಲ್ಲಿ

ದುಬೈ| Krishnaveni K| Last Modified ಬುಧವಾರ, 13 ಅಕ್ಟೋಬರ್ 2021 (21:11 IST)
ದುಬೈ: ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೋಲ್ಕೊತ್ತಾ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ135 ರನ್ ಗಳಿಸಿದೆ.
 

ಇಂದು ಡೆಲ್ಲಿಗೆ ಬಲಾಢ್ಯ ಬ್ಯಾಟಿಂಗ್ ಕೈಕೊಟ್ಟಿತ್ತು. ಪೃಥ್ವಿ ಶಾ 18 ರನ್ ಗಳಿಗೆ ಔಟಾದರೆ ಶಿಖರ್ ಧವನ್ 39 ಎಸೆತ ಎದುರಿಸಿ 36 ರನ್ ಗಳಿಸಿದರು. ಇನ್ನು ಮಾರ್ಕಸ್ ಸ್ಟಾಯ್ನಿಸ್ 17 ರನ್ ಗಳಿಸಲು 23 ಎಸೆತ ಎದುರಿಸಿದರು. ಶ್ರೇಯಸ್ ಐಯರ್ ಅಜೇಯ 30 ರನ್ ಗಳಿಸಿದರೆ ನಾಯಕ ರಿಷಬ್ ಪಂತ್ ಕೊಡುಗೆ 6 ರನ್. ಶಿಮ್ರೋನ್ ಹೆಟ್ ಮೇರ್ ಅಬ್ಬರದ ಬ್ಯಾಟಿಂಗ್ ಆರಂಭಿಸಿದರೂ 17 ರನ್ ಗಳಿಸುವಷ್ಟರಲ್ಲಿ ರನೌಟ್ ಆದರು.
 
ಡೆಲ್ಲಿ ಪರ ಸ್ಪಿನ್ನರ್ ವರುಣ್ ಚಕ್ರವರ್ತಿ 2, ಫರ್ಗ್ಯುಸನ್ ಮತ್ತು ಶಿವಂ ಮಾವಿ ತಲಾ 1 ವಿಕೆಟ್ ಕಬಳಿಸಿದರು. ಇದೀಗ ಕೆಕೆಆರ್ ಗೆ ಗೆದ್ದು ಫೈನಲ್ ತಲುಪಲು 136 ರನ್ ಗಳ ಗುರಿ ಸಿಕ್ಕಿದೆ.
ಇದರಲ್ಲಿ ಇನ್ನಷ್ಟು ಓದಿ :