ಐಪಿಎಲ್ 14 ನೋಡಲು ಕಾದಿರುವ ಪ್ರೇಕ್ಷಕರಿಗೆ ನಿರಾಸೆ

ಮುಂಬೈ| Krishnaveni K| Last Modified ಸೋಮವಾರ, 8 ಮಾರ್ಚ್ 2021 (09:28 IST)
ಮುಂಬೈ: ರ ಕೂಟ ಭಾರತದಲ್ಲೇ ನಡೆಯುತ್ತಿರುವುದು ಅಭಿಮಾನಿಗಳಿಗೆ ಸಂತೋಷ ತಂದಿದೆ. ಆದರೆ ಅದರ ಜೊತೆಗೇ ಶಾಕ್ ಕೂಡಾ ಕೊಟ್ಟಿದೆ.
 > ಏಪ್ರಿಲ್ ನಲ್ಲಿ ಆರಂಭವಾಗಲಿರುವ ಐಪಿಎಲ್ 14 ನೇ ಆವೃತ್ತಿ ಭಾರತದಲ್ಲೇ ನಡೆಯುತ್ತಿದ್ದರೂ ಪ್ರೇಕ್ಷಕರಿಗೆ ಖುದ್ದಾಗಿ ಮೈದಾನಕ್ಕೆ ಬಂದು ವೀಕ್ಷಿಸುವ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಕೊರೋನಾ ಕಾರಣದಿಂದ ಪ್ರೇಕ್ಷಕರಿಲ್ಲದೇ ಐಪಿಎಲ್ ನಡೆಸಲು ಬಿಸಿಸಿಐ ತೀರ್ಮಾನಿಸಿದೆ.>   ಲೀಗ್ ಹಂತದ ಪಂದ್ಯಗಳನ್ನು ವೀಕ್ಷಿಸಲಂತೂ ಅವಕಾಶವೇ ಇಲ್ಲ. ಹಾಗಿದ್ದರೂ ಪರಿಸ್ಥಿತಿ ನೋಡಿಕೊಂಡು ಪ್ಲೇ ಆಫ್ ಮತ್ತು ಫೈನಲ್ ಪಂದ್ಯಕ್ಕೆ ಸೀಮಿತ ಪ್ರೇಕ್ಷಕರಿಗೆ ಅವಕಾಶ ಸಿಗಬಹುದು. ಈ ಪಂದ್ಯಗಳು ಅಹಮ್ಮದಾಬಾದ್ ನ ವಿಶ್ವದ ಬೃಹತ್ ಕ್ರೀಡಾಂಗಣ ಮೊಟೆರಾದಲ್ಲಿ ನಡೆಯುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :