ಐಪಿಎಲ್ 14: ಆರ್ ಸಿಬಿಗೆ ಕಪ್ ಗೆಲ್ಲುವ ಚಾನ್ಸ್ ಎಷ್ಟಿದೆ?

ದುಬೈ| Krishnaveni K|
ದುಬೈ: ಈ ಬಾರಿಯಾದರೂ ಕಪ್ ಗೆಲ್ಲುತ್ತಾ? ಪ್ರತೀ ಬಾರಿಯೂ ಆರ್ ಸಿಬಿ ಅಭಿಮಾನಿಗಳ ಪ್ರಶ್ನೆ ಇದುವೇ. ಈ ಬಾರಿ ಕಪ್ ನಮ್ದೇ ಆಗಲು ಆರ್ ಸಿಬಿಗೆ ಭಾರೀ ಅವಕಾಶವಿದೆ. ಅದನ್ನು ಬಳಸಿಕೊಳ್ಳಬೇಕಷ್ಟೇ.  
> ಆರ್ ಸಿಬಿ ಹೊರತಾಗಿ ಪ್ಲೇ ಆಫ್ ಹಂತಕ್ಕೇರಿದ ತಂಡವೆಂದರೆ ಡೆಲ್ಲಿ, ಚೆನ್ನೈ, ಕೋಲ್ಕೊತ್ತಾ. ಆದರೆ ಆರ್ ಸಿಬಿ ಈ ಬಾರಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ತನ್ನ ಶಕ್ತಿ ಪ್ರದರ್ಶಿಸಿರುವುದು ವಿಶೇಷ.>   ಇದುವರೆಗೆ ಆರ್ ಸಿಬಿ ಬ್ಯಾಟಿಂಗ್ ಕೇವಲ ಎಬಿಡಿ ವಿಲಿಯರ್ಸ್, ವಿರಾಟ್ ಕೊಹ್ಲಿ ಮೇಲೆ ನಿರ್ಭರವಾಗಿತ್ತು. ಆದರೆ ಈ ಬಾರಿ ಇಬ್ಬರ ಹೊರತಾಗಿ ಬೇರೆಯವರೂ ತಂಡದ ಬ್ಯಾಟಿಂಗ್ ಜವಾಬ್ಧಾರಿ ಹೊತ್ತಿದ್ದಾರೆ. ಯುವ ಆಟಗಾರ ಭರತ್, ಹಿರಿಯ ಗ್ಲೆನ್ ಮ್ಯಾಕ್ಸ್ ವೆಲ್ ಇದುವರೆಗೆ ಮಿಂಚಿದ್ದಾರೆ. ಇದು ಉತ್ತಮ ಬೆಳವಣಿಗೆಯೇ. ಬೌಲಿಂಗ್ ನಲ್ಲೂ ಸಿರಾಜ್ ಜೊತೆಗೆ ಚಾಹಲ್, ಹರ್ಷಲ್ ಪಟೇಲ್ ಮಿಂಚುತ್ತಿದ್ದಾರೆ. ಇದೆಲ್ಲಾ ಈ ಬಾರಿ ಪ್ಲಸ್ ಪಾಯಿಂಟ್ ಮತ್ತು ಕಪ್ ಗೆಲ್ಲಲು ಇದು ಸುವರ್ಣಾವಕಾಶ.ಇದರಲ್ಲಿ ಇನ್ನಷ್ಟು ಓದಿ :