ದುಬೈ: ಐಪಿಎಲ್ 14 ರಲ್ಲಿ ಇಂದು ಪಂಜಾಬ್ ನ ಕನ್ನಡಿಗರು ವರ್ಸಸ್ ಬೆಂಗಳೂರು ತಂಡದ ನಡುವೆ ಪಂದ್ಯ ನಡೆಯಲಿದೆ.ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಪಡೆ ಈಗಾಗಲೇ ಸೋತು ಹೆಚ್ಚು ಕಡಿಮೆ ಪ್ಲೇ ಆಫ್ ನಿಂದ ಹೊರಬಿದ್ದಿದೆ. ಹಾಗಿದ್ದರೂ ಪ್ರತಿಷ್ಠೆ ಉಳಿಸಿಕೊಳ್ಳಲು ಅದಕ್ಕೀಗ ಉತ್ತಮ ಅವಕಾಶ.ಇನ್ನು ಆರ್ ಸಿಬಿಗೆ ಪ್ಲೇ ಆಫ್ ಹಂತಕ್ಕೆ ತೇರ್ಗಡೆಯಾಗಲು ಇನ್ನೂ ಒಂದು ಗೆಲುವು ಬೇಕು. ಈ ಪಂದ್ಯವನ್ನು ಗೆದ್ದರೆ ಪ್ಲೇ ಆಫ್ ಹಂತಕ್ಕೆ ಸ್ಥಾನ ಗಟ್ಟಿಯಾಗಲಿದೆ.