ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕವಾಗಿ ಗೆಲ್ಲುವುದರೊಂದಿಗೆ ಕೊಹ್ಲಿ ಬಳಗ ಯುಎಇನಲ್ಲಿ ಗೆಲುವಿನ ಖಾತೆ ತೆರೆದಿದೆ. ಅಲ್ಲದೆ, ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಿದ್ದವರಿಗೆ ಕೊಹ್ಲಿ ಈ ಮೂಲಕ ತಿರುಗೇಟು ಕೊಟ್ಟಿದ್ದಾರೆ.ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 165 ರನ್ ಗಳಿಸಿತ್ತು. ಈ ಮೊತ್ತ ಬಲಿಷ್ಠ ಮುಂಬೈ ಬ್ಯಾಟಿಂಗ್ ಗೆ ಸುಲಭ ತುತ್ತಾಗಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು.