ದುಬೈ: ಕೊರೋನಾದಿಂದಾಗಿ ಭಾರತದಲ್ಲಿ ಆರಂಭವಾಗಿದ್ದ ಐಪಿಎಲ್ 14 ಕೂಟ ಅರ್ಧದಲ್ಲೇ ರದ್ದಾಗಿತ್ತು. ಅದೀಗ ಯುಎಇನಲ್ಲಿ ಪುನರಾರಂಭಗೊಳ್ಳುತ್ತಿದೆ. ಭಾರತದಲ್ಲಿ ನಡೆದ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ, ಆರ್ ಸಿಬಿ, ಮುಂಬೈ ತಂಡಗಳು ಅಗ್ರ ನಾಲ್ಕು ಸ್ಥಾನದಲ್ಲಿದ್ದವು. ಈಗ ವ್ಯತ್ಯಸ್ಥ ವಾತಾವರಣದಲ್ಲಿ ತಂಡಗಳು ಮತ್ತೆ ಮೊದಲಿನಿಂದ ಆಟ ಶುರು ಮಾಡಬೇಕಿದೆ.ಅದರಲ್ಲೂ ಆರ್ ಸಿಬಿ ಕಳೆದ ಎಲ್ಲಾ ಋತುವಿಗಿಂತಲೂ ಸುಧಾರಿತ ಪ್ರದರ್ಶನ ನೀಡಿತ್ತು. ಅದೇ ರೀತಿ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗುತ್ತಾ ಕಾದು ನೋಡಬೇಕಿದೆ.