ಐಪಿಎಲ್ 14 ರಲ್ಲಿ ತಂಡಗಳಿಗೆ ತವರಿನಲ್ಲಿ ಆಡುವ ಯೋಗವಿಲ್ಲ

ಮುಂಬೈ| Krishnaveni K| Last Modified ಮಂಗಳವಾರ, 9 ಮಾರ್ಚ್ 2021 (08:36 IST)
ಮುಂಬೈ: ರ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ದೇಶದ ಆರು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಆದರೆ ತವರಿನ ಅಂಕಣದಲ್ಲಿ ಆಡುವ ಯೋಗ ಯಾವುದೇ ತಂಡಕ್ಕೆ ಇಲ್ಲ.
 > ಬೆಂಗಳೂರಿನಲ್ಲಿ ಒಟ್ಟು 10 ಪಂದ್ಯಗಳಿವೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಲ್ಲಿನ ಮೈದಾನದಲ್ಲಿ ಆಡುತ್ತಿಲ್ಲ. ಅದೇ ರೀತಿ ಮುಂಬೈ, ದೆಹಲಿ, ಚೆನ್ನೈ ತಂಡಗಳಿಗೂ ತವರಿನ ಪ್ರೇಕ್ಷಕರ ಎದುರು ಆಡುವ ಯೋಗವಿಲ್ಲ.>   ಈ ಬಾರಿ ಒಟ್ಟು ಆರು ನಗರಗಳಲ್ಲಿ ಪಂದ್ಯಗಳು ನಡೆಯಲಿದ್ದು, ಅವುಗಳ ಪೈಕಿ ಯಾವ ತಂಡಗಳಿಗೂ ತಮ್ಮ ತವರು ಪ್ರೇಕ್ಷಕರ ಎದುರು ಆಡುವ ರೀತಿ ವೇಳಾಪಟ್ಟಿ ನಿಯೋಜಿಸಲಾಗಿಲ್ಲ. ಇಡೀ ಕೂಟದಲ್ಲಿ ಒಟ್ಟು ಮೂರು ಬಾರಿ ಮಾತ್ರ ತಂಡಗಳು ಬೇರೆ ಊರಿಗೆ ಪ್ರಯಾಣ ಬೆಳೆಸಲಿವೆ.
 
ಈ ಬಾರಿ ಲೀಗ್ ಹಂತದ ಪಂದ್ಯಗಳಲ್ಲಿ ಪ್ರೇಕ್ಷಕರಿಗೆ ಮೈದಾನಕ್ಕೆ ಬರಲು ಅವಕಾಶವಿಲ್ಲ. ಹೀಗಾಗಿ ತಂಡಗಳೂ ಸಮಾಧಾನ ಹೊಂದಬಹುದು. ಹಾಗಿದ್ದರೂ ತವರಿನ ಅಂಕಣದ ಲಾಭವೆತ್ತಲು ಯಾವುದೇ ತಂಡಕ್ಕೂ ಅವಕಾಶ ಸಿಗದು.ಇದರಲ್ಲಿ ಇನ್ನಷ್ಟು ಓದಿ :